Skip to main content

Posts

Showing posts from August, 2022

poem by student Pallavi kumar

ನನ್ನ ದೇಶ ನನ್ನದೆನ್ನುವ ಅಭಿಮಾನವು ನಿಮ್ಮದು ಆ.. ಶೃಂಗ-ಶಿಖರಗಳಾ ಅಂತರಂಗವೆಲ್ಲ ನಿಮ್ಮದು ಸತ್ಯ ತ್ಯಾಗ ನಿಸ್ವಾರ್ಥದ ಸೇವೆ ದೇಶಕೆಂದುನಿಮ್ಮದು ದೇಶಕಾಗಿ ಪ್ರಾಣ ತೆತ್ತ ಅಮರರಾದವೀರರೇ  ವಂದೇ ಮಾತರಂ ವಂದೇ ಮಾತರಂ ಆ.. ಹಾ..  ಪ್ರತಿ ಕ್ಷಣದ ಎಚ್ಚರದೊಳು ಯೋಧರೆದೆಯ ಕೆಚ್ಚಿನಲಿ ನನ್ನ ದೇಶ ನನ್ನವರಿಗಾಗಿ ಕಾಯ್ವೆನೆಂಬ ಎಚ್ಚರದಲಿ ವೈರಿಗಳೆದೆ ನಡುಗಿಸಿದ ಬೆಂಕಿ ಜ್ವಾಲೆಯೇ ದೇಶಕ್ಕೆಂದು ಬಲಿದಾನ ಕೊಡಲು ಸಿದ್ಧ ಎನ್ನುವ ವೀರರೇ   //ವಂದೇ ಮಾತರಂ// ಮೈ ಕೊರೆವ ಚಳಿಯಲ್ಲಿ ದಿಗಿಲಾಗಿಸುವ ಇರುಳಲ್ಲಿ ನೆತ್ತರದ ಒಕೂಳಿಯ ಮಧ್ಯೆಮಾತೆಯ ನೆನೆಯುತಲಿ ದೇಶಕೆಂದೇ ಸಂಜೀವಿನಿಯಾದ  ಯೋಧರೆ ಕಡುಕತ್ತಲಲಿ ದೇಶಕ್ಕೆ ಬೆಳಕಾದ ಸೂರ್ಯರೇ //ವಂದೇ ಮಾತರಂ// ಸಕಲ ಸುಖ-ಸಂತೋಷವ ತೊರೆದು ಸಜ್ಜಾದ ಕಲ್ಕಿಗಳೇ ಮನೆ ಮಡದಿ ಮಕ್ಕಳಿಂದ ದೂರವಿದ್ದು ದೇಶವ ಜಪಿಸಿದ ಯೋಗಿಗಳೇ ಜೀವವ ಲೆಕ್ಕಿಸದೆ ಸಜ್ಜಾಗಿ ಎದೆಯೊಡ್ಡಿ ನಿಂತ ವೀರರೇ ದೇಶಕೆಂದೇ ಸದಾ ಸಿದ್ಧ ಕೊರಳು ಎಂದು ನಿಂತ ಛಲಗಾರರೇ ಇಗೊ ನಿಮಗೆ ನಮ್ಮ ಸಾವಿರ ವಂದನೆ  //ವಂದೇ ಮಾತರಂ// ಯುವ ಕವಯಿತ್ರಿ: ಪಲ್ಲವಿ ,ಕುಮಾರ,ಕಾಂಬಳೆ  BBA   student GFGC collage raibag  ತಾ. ರಾಯಬಾಗ ಜಿಲ್ಲಾ: ಬೆಳಗಾವಿ   ಸಾಕಿನ್: ಜಲಾಲಪೂರ  ಫೋನ್ :೯೩೮೦೬೧೦೩೫೫ ಧನ್ಯವಾದಗಳು. .......